ತುಂಬಾ ಮುಂದೆ ಸಾಗಿ ಬಂದಿರುತ್ತೇವೆ, ಸುಸ್ತಾಗಿರುತ್ತದೆ , ಎಷ್ಟೇ ಮಾಡಿದರು ಮುಗಿಯಿತ್ತಿಲ್ಲ ಎಂದೆನಿಸುತ್ತಿರುತ್ತದೆ. ಗುರಿಯೂ ಎಷ್ಟು ದೂರವಿದೆ ಎಂಬ ಅಂದಾಜು ಅಥವಾ ಕಲ್ಪನೆಇರುವುದಿಲ್ಲ. ಹತಾಶೆಯಿಂದ ದಿನ ದೂಡುತಿರುತ್ತೆವೆ. ಈ ಹೆಜ್ಜೆಯನ್ನು ದಾಟಿದರೆ ಗೆಲುವು ನಮ್ಮದೇ, ಆದರೆ ಅಷ್ಟೆಕ್ಕೆ ನಿನ್ತುಬಿಡುತ್ತೆವೆ. ಅಲ್ಲಿಯ ತನಕ ಮಾಡಿದ ಪ್ರಯತ್ನವೆಲ್ಲ ಮಣ್ಣುಪಾಲಗಿಬಿಡುತ್ತದೆ. ಮತ್ತೆ ಮುಂದುವರೆಯಲು ಮೊದಲಿಂದ ಪ್ರಯತ್ನಿಸಬೇಕು, ಅಷ್ಟೊಂದು ಶಕ್ತಿಯನ್ನು ಮತ್ತೆ ಕ್ರೂಡಿಕರಿಸಿ ಹೋರಾಟಮಾಡ್ಬೆಕು. ಶುರುವಿನಲ್ಲಿನ ಆತ್ಮವಿಶ್ವಾಸ ಹಂತ ಹಂತವಾಗಿ ಕಡಿಮೆಯಾಗಿ, ಖಾಲಿಯಾಗಿಬಿಡುತ್ತದೆ. ನಮ್ಮ ವಿಶ್ವಾಸ- ನಂಬಿಕೆ ಅರ್ಧಕ್ಕೆ ಖಾಲಿಯಾಗುವುದು ಏತಕ್ಕೆ ?

ನಿಮಗೆ ಐಎಎಸ್ ಆಫೀಸರ್ ಆಗಬೇಕು ಅಂತ ತುಂಬಾ ಅಸೆ ಇರುತ್ತೆ, ಅದಕ್ಕೆ ತಕ್ಕಂತೆ ಪ್ರಯತ್ನವನ್ನೂ ಮಾಡುತಿರುತ್ತಿರಿ, ಆದರೆ ಒಂದೆರಡು ಪ್ರಯತ್ನದಲ್ಲಿ ಸೋತ ತಕ್ಷಣ “ಸಾಕು” ಅನ್ನಿಸಲು ಶುರುವಾಗಿಬಿಡುತ್ತದೆ. ದಾರಿ ದಾರಿ ಸವೆಸುತ್ತ ಸವೆಸುತ್ತ demotivate ಆಗಿಬಿಡುತ್ತಿರಿ. ನಿಮ್ಮ ಸ್ನೇಹಿತ ಒಳ್ಳೆ ಕಂಪನಿ ಸೇರಿ ಉತ್ತಮ ಸಂಬಳ ಪಡೆಯುತ್ತಿರುತ್ತಾನೆ, ನೀವಿಲ್ಲಿ ಇನ್ನು ಓದುತ್ತಿರುತ್ತಿರಿ. ಇನ್ನೊಬ್ಬ ಮದುವೆಯಾಗಿ “settle” ಆಗಿರುತ್ತಾನೆ, ನೀವು ಇನ್ನು ನ್ಯೂಸ್ ಪೇಪರ್ ಗಳ ಜೊತೆ ಸಂಸಾರ ಮಾಡುತ್ತಿರುತ್ತಿರಿ. Frustration ಶುರುವಾಗುವುದೇ ಅಲ್ಲಿ! . ನನಗೆಲ್ಲ ಇದು ಬೇಕಾಗಿತ್ತಾ ಅನ್ನಿಸುತ್ತದೆ, ಸುತ್ತ-ಮುತ್ತ ಇರುವವರ ಕೊಂಕು ಮಾತುಗಳಿಗೆ ಉತ್ತರಿಸುತ್ತ ಮುoದಡಿಯಿಡಬೆಕು. ಊಫ! ಸಾಕು, ನನಗಾಗದು ,ನನಗದು ಅಲ್ಲ ಎಂದು ಅರ್ಧಕ್ಕೆ ಎದ್ದುಬಂದುಬಿಡುವುದು ಆಗಲೆ. ಶುರುವಿನಲ್ಲಿನ ಉತ್ಸಾಹ , positive motivation ಇಗಿರುವುದಿಲ್ಲ, ಬೆನ್ನು ತಟ್ಟಿ ಹೋಗು , ಮುನ್ನುಗ್ಗು ಅನ್ನುವ ಮನಸ್ಸುಗಳಿರುವುದಿಲ್ಲ. ಹಾಗೆ ಒಂದು ಸಾರಿ ಎದ್ದು ಬಂದ ಮೇಲೆ ಕಾಡುವ ಸಣ್ಣ ಪಾಪ ಪ್ರಜ್ಞೆಗೆ, ಇನ್ನೂ ಪ್ರಯತ್ನಿಸಬಹುದಗಿತ್ತು ಅನ್ನುವ ಒಳ ಮನಸಿನ ಕೂಗಿಗೆ ಹಸಿ ಹಸಿ ಸುಳ್ಳು ಹೇಳಿ ,ಲೈಫು ಇಷ್ಟೇನೆ ಎಂದು ಸಂತಯಿಸಿಬಿಡುತ್ತೇವೆ. ನಮ್ಮದೇ ಕೋಣೆಯಲ್ಲಿ, ಅದೇ ಪರೀಕ್ಷೆಗೆ ತಯಾರಗುತ್ತಿರುವಾತ, ಇದೇ ಹತಾಶೆಯನ್ನು ಮೀರಿ , ಹಠಮಾರಿಯಾಗಿ ಪರೀಕ್ಷೆಯಲ್ಲಿ ಗೆದ್ದು ಬೀಗುತ್ತಿರುವಾಗ, ನೀವು ಅವನಿಗೆ ಚಪ್ಪಾಳೆ ತಟ್ಟುತ್ತಿತುತ್ತಿರಿ , ನಿಮ್ಮ ಕೈ ಖಾಲಿಯಗಿಟ್ಟುಕೋಂಡು !!

ನೆನಪಿಡಿ! ಇಲ್ಲಿ ಯಾರೂ ಯಾರಿಗೂ ಸಹಾಯ ಮಾಡುವುದಿಲ್ಲ. ನಿಮಗೆ ನೀವೇ ಬೆನ್ನುತಟ್ಟಿಕೋಳ್ಳಬೆಕು ಮತ್ತು ಮುನುಗ್ಗಬೇಕು. ಹಾಗೆ ಮುಂದುವರೆದಾಗಲೇ ಗೆಲುವು. ಸ್ವಾಮಿ ವಿವೇಕಾನಂದರ ಮಾತನ್ನು ಗಮನಿಸಿ : ನಿನ್ನೆಲ್ಲ ಕಷ್ಟಗಳಿಂದ ನಿನ್ನನ್ನು ನೀನೆ ಪಾರುಮಾಡಿಕೋ, ನಿನ್ನನ್ನು ನಿನೇ ರಕ್ಷಿಸಿಕೋ. ನಿನ್ನ ಸಹಾಯಕ್ಕೆ ಯಾರೂ ಇಲ್ಲ, ಹಿಂದೆಯೂ ಇರಲಿಲ್ಲ. ನಿನ್ನ ಸಹಾಯಕ್ಕೊಬ್ಬ ಇರುವನೆಂದು ಭಾವಿಸುವುದು ಒಂದು ಸವಿಯಾದ ಭ್ರಮೆ ಅಷ್ಟೇ. ಅದರಿಂದ ಯಾವುದೇ ಪ್ರಯೋಜನವಿಲ್ಲ. ಸಾಕಿನ್ನು ಈ ದೌರ್ಬಲ್ಯ! 

ಕನಸು ಕಂಡವರು ನೀವು , ಪ್ರಯತ್ನಿಸಿ ನನಸು ಮಾಡಿಕೊಳ್ಳಬೇಕದವರೂ ನೀವೇ! ಹಿಡಿದ ಕೆಲಸವನ್ನು ಅರ್ಧಕ್ಕೆ ಎಂದೂ ಬಿಟ್ಟು ಬರಬೇಡಿ , ಅದು ನಿಮ್ಮ ಸಾಮರ್ಥ್ಯಕ್ಕೆ ನೀವೇ ಮಾಡಿದ ಅವಮಾನ. ಸೋತೆ ಎನ್ನಬೇಡಿ, ಕೈಲಾಗದು ಎಂದು  ಹಿಂದಡಿ ಇಡಬೇಡಿ, ಸುಮ್ಮನೆ ಮುನ್ನುಗ್ಗಿ. ಗೆದ್ದರೂ-ಸೋತರು ಅದು ನಿಮ್ಮದೇ, ಕೇವಲ ನಿಮ್ಮದು ಮಾತ್ರ. ಸುಮ್ಮನೆ ಅನoದಿಸಿ. ಗುಡಿಸಲು ಕಟ್ಟುವುದು ಸುಲಭ ಆದರೆ ಅರಮನೆಯನ್ನಲ್ಲ ! ಅರ್ದಕ್ಕೆ  ಬಿಟ್ಟು ಬರುವ ಮುನ್ನ , ಸಾವನ್ನೇ ೮ ದಿನಗಳ ಕಾಲ ಕಾಯಿಸಿದ ಯೋಧ ಹನುಮಂತಪ್ಪನನ್ನು ನೆನೆಸಿಕೊಳ್ಳಿ, ಆತ್ಮಸ್ತರ್ಯ- ವಿಶ್ವಾಸ ಒಂದಿದ್ದರೆ ಎನುಬೇಕಾದರೂ ಮಾಡಬಹುದು!     

ಕೋನೆಯೆದಾಗಿ:   Begin at the beginning and go on till you come to the end: then stop.                      
Image source: Internet 

DISCLAIMER: The author is solely responsible for the views expressed in this article. The author carries the responsibility for citing and/or licensing of images utilized within the text.